International Journal of Leading Research Publication
E-ISSN: 2582-8010
•
Impact Factor: 9.56
A Widely Indexed Open Access Peer Reviewed Multidisciplinary Monthly Scholarly International Journal
Plagiarism is checked by the leading plagiarism checker
Call for Paper
Volume 7 Issue 3
March 2026
Indexing Partners
ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಒಳನೋಟಗಳು
| Author(s) | ಡಾ. ಬಿ. ರೇವಣ್ಣ |
|---|---|
| Country | India |
| Abstract | ಹನ್ನೆರಡನೇ ಶತಮಾನ ಭಾರತೀಯ ಹಾಗೂ ಕರ್ನಾಟಕ ಇತಿಹಾಸದಲ್ಲಿ ಬಹುಮುಖ್ಯ ಕಾಲಘಟ್ಟ. ಆ ಕಾಲದ ಶಿವಶರಣರು ಜೀವನದ ಹೊಸ ಮೌಲ್ಯಗಳನ್ನು ಎತ್ತಿ ಹಿಡಿದು, ವರ್ಣಾಶ್ರಮ ಧರ್ಮಗಳ ಹಂಗನ್ನು ಕಿತ್ತು ಬಿಸುಟು ಸಮತಾ ತತ್ವದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸಲು ಹೆಣಗಿದರು. ಅಂದಿನ ಕಾಲದ ಜನತೆಗೆ ತಿಳುವಳಿಕೆ ನೀಡಲು ಸರಳ, ಸಹಜ ಮತ್ತು ಜನಸಾಮನ್ಯರಿಗೆ ಅರ್ಥವಾಗುವ ಭಾಷೆಯನ್ನು ಬಳಸಿದರು. ಜಿವನದ ಮೌಲ್ಯಗಳನ್ನು ನವಶೈಲಿಯಲ್ಲಿ ನಿರೂಪಿಸಿದರು. ಈ ರೀತಿ ನಿರೂಪಿಸಿದ ಭಕ್ತಿ ಭಾವಾವೇಶ ಪೂರ್ಣ ಅನಿಸಿಕೆಗಳನ್ನು ‘ವಚನ’ ಎನ್ನಲಾಯಿತು. ವಚನ ಶಬ್ಧಕ್ಕೆ ಅರ್ಥ-ಪ್ರತಿಜ್ಞೆ. ಆತ್ಮಶಾಕ್ಷಿಯ ಮಾತು ಎಂದು ಅರ್ಥ. ನಡೆ ಹೇಗೆ ಇರಲಿ, ನುಡಿ ಮಾತ್ರ ಕಲಾತ್ಮಕವಾದುದ್ದು, ರಚನೆ ಎಂದರೆ, ನುಡಿದಂತೆ ಆತ್ಮಸಾಕ್ಷಿಯ ವಾಣಿ ವಚನವೆನ್ನಿಸುತ್ತದೆ. ವಚನಗಳು ಪಂಡಿತ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ. ಪಂಡಿತರು ಜೀವಿಸಿರುವಾಗಲೇ ತಮ್ಮ ವಿಚಾರಗಳನ್ನು ಬರೆದು, ಅವುಗಳಿಗೆ ಸಂವಿಧಾನಾತ್ಮಕ ಮುದ್ರೆ ಒತ್ತುತ್ತಾರೆ. ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ - ಹೃದಯಕ್ಕೆ ಮುಟ್ಟುವಂತೆ ಬಿಡಿ ಮಾತುಗಳ ಮೂಲಕ ಹೇಳುತ್ತಾರೆ. ಶರಣರು ಬಿಡಿ ಮಾತುಗಳಂತೆ ಪೋಣಿಸಿ ವಚನಗಳನ್ನು ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿತ್ತು. ಈ ಶತಮಾನದ (೧೨ನೇ ಶತಮಾನ) ಕನ್ನಡ ವಚನ ಸಾಹಿತ್ಯದಲ್ಲಿ ಬರುವ ಕಾಯಕ (ಶ್ರಮದ ಘನತೆ) ಮತ್ತು ದಾಸೋಹ (ನಿಸ್ವಾರ್ಥ ಹಂಚಿಕೆ) ಕುರಿತಾದ ಸಾಹಿತ್ಯವು ಬಸವಣ್ಣ ಮತ್ತು ಶರಣರು ಪ್ರತಿಪಾದಿಸಿದ ಆಳವಾದ ಸಾಮಾಜಿಕ-ಆರ್ಥಿಕ ಮತ್ತು ಆಧ್ಯಾತ್ಮಿಕ ತತ್ವಶಾಸ್ತ್ರವನ್ನು ಬಹಿರಂಗಪಡಿಸುತ್ತದೆ. ವಿದ್ವತ್ಪೂರ್ಣ ವಿಮರ್ಶೆಗಳು ಈ ಪರಿಕಲ್ಪನೆಗಳನ್ನು ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು, ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ಸಹಾನುಭೂತಿ ಮತ್ತು ಹಂಚಿಕೆಯ ಜವಾಬ್ದಾರಿಯ ಮೇಲೆ ಕೇಂದ್ರೀಕೃತವಾದ ಸಮುದಾಯವನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಸಮಾನತಾವಾದಿ ಚಳುವಳಿಯ ಮೂಲಾಧಾರವೆಂದು ಈ ಲೇಖನ ವಿವರಿಸುತ್ತವೆ. |
| Keywords | ವಚನ ಸಾಹಿತ್ಯ, ಭಕ್ತಿ ಸಾಹಿತ್ಯ. ಪಂಡಿತರು, ಶಿವಶರಣರು ಜೀವನ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ |
| Published In | Volume 4, Issue 5, May 2023 |
| Published On | 2023-05-12 |
Share this

CrossRef DOI is assigned to each research paper published in our journal.
IJLRP DOI prefix is
10.70528/IJLRP
Downloads
All research papers published on this website are licensed under Creative Commons Attribution-ShareAlike 4.0 International License, and all rights belong to their respective authors/researchers.